ಕೊಲೆಗಾರ್ತಿ
ನವೆಂಬರ್ 21, 2011 ನಿನಗಾಗಿ ಬರೆದಿರುವೆ ಮೂಲಕ
ದ್ವೇಷ ಸಾರ್ಥಗಳ ಪ್ರೀತಿ ಮಾಯೆ
ಕರಿನೆರಳ ಕನವರಿಕೆ ಕಾಣದ ಸುಳಿವು
ಹೃದಯದ ಪದರದಿ ವಿಷದ ಛಾಯೆ
ಆತನಿಗಿಲ್ಲ ಕೊಲೆಯಾದ ಅರಿವು
ಕುಡಿನೋಟ ಬಳಸಿ ಸೆರೆಯಾದ ಗಳಿಗೆ
ಮೋಹದ ಪಾಶಕ್ಕೆ ಬಿಟ್ಟಿರದ ಚಡಪಡಿಕೆ
ಕಣ್ಣ ಕಂಬನಿಯಲ್ಲಿ ಕಣ್ಣೀರ ಉಳಿಕೆ
ಹೃದಯ ಸಾಮ್ರಾಜ್ಯಕ್ಕೆ ಅವಳದೆ ಆಳ್ವಿಕೆ
ಅಂತರಂಗ,ಬಹಿರಂಗದ ಅಗ್ನಿಜ್ವಾಲೆ
ಭಯವಿಲ್ಲದೇ ನುಡಿ ಬಯಲಾಗದ ಸತ್ಯ
ಸಿಡಿಲಾಗಿ ಅಪ್ಪಳಿಸಿದೆ ವಂಚನೆಯ ಅಲೆ
ನಿನಗಾಗಿ ಧಾರೆಯೆರೆದ ಪ್ರೀತಿಯ ಸತ್ಯ
Like this:
Like ಲೋಡ್ ಆಗುತ್ತಿದೆ...
Posted in ಕವನ | ನಿಮ್ಮ ಟಿಪ್ಪಣಿ ಬರೆಯಿರಿ
ನಿಮ್ಮದೊಂದು ಉತ್ತರ